"ಗುರು ಎಂದರೆ ವ್ಯಕ್ತಿಯಲ್ಲ ಒಂದು ಶಕ್ತಿ ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಬ್ಧವೇ ಗುರು"
ಸ್ವಾಮಿ ವಿವೇಕಾನಂದ.
ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿರುವ ನಮ್ಮ ಶಿಕ್ಷಣ ಸಂಸ್ಥೆಯು ಪ್ರತಿಭಾವಂತ ಉಪನ್ಯಾಸಕರಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾ ಬಂದಿದೆ.ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಉಪನ್ಯಾಸಕರನ್ನು ಅವರ ಬೋಧನಾ ಅನುಭವ, ಶೈಕ್ಷಣಿಕ ಅರ್ಹತೆ, ವಿಷಯಕ್ಕೆ ಸಂಬಂಧಿಸಿದ ಜ್ಞಾನ, ಬೋಧನಾ ಕೌಶಲ್ಯ ಇವೆಲ್ಲದರ ಆಧಾರದ ಮೇಲೆ ಪರಿಣಿತ ತಜ್ಞರ ಗುಂಪು ಅವರನ್ನು ಆಯ್ಕೆ ಮಾಡುತ್ತಾರೆ. ಜೊತೆಗೆ ಉಪನ್ಯಾಸಕರ ತರಗತಿಯ ಬೋಧನಾ ಕೌಶಲ್ಯವನ್ನು ಕುರಿತು ವಿದ್ಯಾರ್ಥಿಗಳಿಂದ ಅಭಿಪ್ರಾಯ ಸಂಗ್ರಹಿಸುವುದರ ಮೂಲಕ ಉಪನ್ಯಾಸಕರ ವಿಷಯ ಜ್ಞಾನ ಮತ್ತು ಬೋಧನಾ ಸಾಮರ್ಥ್ಯವನ್ನು ಪರಿಕಿಸಲಾಗುವುದು. ಪ್ರತಿ ಉಪನ್ಯಾಸಕರು ತಮ್ಮ ವಿಷಯಕ್ಕೆ ಸಂಬಂಧಪಟ್ಡ ಹಾಗೇ ಉಪನ್ಯಾಸಕರಿಗೆ ಕೌಶಲ್ಯಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ತಮ್ಮ ಬೋಧನಾ ಕೌಶಲ್ಯ ಮತ್ತು ವಿಷಯ ಜ್ಞಾನವನ್ನು ಅಭಿವೃದ್ದಿಗೊಳಿಸಲಾಗುವುದು. ಉಪನ್ಯಾಸಕರುಗಳು ವಿದ್ಯಾರ್ಥಿಗಳ ಜೀವನವನ್ನು ಸರಿದಾರಿಗೆ ನಡೆಸುವ ಆಧಾರ ಸ್ತಂಭಗಳು. ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಉಪನ್ಯಾಸಕರ ಪಾತ್ರ ಬಹುಮುಖ್ಯವಾದದ್ದು.
ಇಲ್ಲಿ ಕ್ಲಿಕ್ ಮಾಡಿ