ಶೇಷಾದ್ರಿಪುರಂ ಇಂಡಿಪೆಂಡೆಂಟ್ ಪ್ರಿ-ಯೂನಿವರ್ಸಿಟಿ ಕಾಲೇಜು, ಮೈಸೂರು

ಬ್ಲಾಸಮ್‌ಗೆ ನಿಮ್ಮ ನಿಖರವಾದ ನಿಲುವು

ಅತ್ಯುತ್ತಮ ಮೂಲಸೌಕರ್ಯ
ಮತ್ತು ಅನುಭವಿ ಶಿಕ್ಷಣ ತಜ್ಞರು

ಬಯಸಿದ ಮೆಟ್ರಿಕ್ ತಲುಪಲು ಸಹಾಯ

ಸಾಂಸ್ಕೃತಿಕ, ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳು

ಒಟ್ಟಾರೆ ಅಭಿವೃದ್ಧಿಯನ್ನು
ಖಚಿತಪಡಿಸಿಕೊಳ್ಳುವುದು

ಅತ್ಯುತ್ತಮವಾದ ನಿಮ್ಮ ಗಮ್ಯಸ್ಥಾನ

ಶೈಕ್ಷಣಿಕ ಮಾರ್ಗದರ್ಶನ ಮತ್ತು ಫಲಿತಾಂಶಗಳಲ್ಲಿ
ಉತ್ಕೃಷ್ಟತೆ

ಸಾಂಸ್ಕೃತಿಕ ನಗರಿಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ

ಹಳೆಬೇರು ಹೊಸ ಚಿಗುರು ಸೇರಿರಲು ಮರ ಸೊಬಗು!

ಋಷಿ ವಾಕ್ಯದೊಡನೆ ವಿಜ್ಞಾನ ಮೇಳವಿಸೆ ಜಶವು ಜನ ಜೀವನಕೆ ಮಂಕುತಿಮ್ಮ!!

ಎಂಬ ಡಿ ವಿ ಜಿ ಯವರ ತತ್ವವನ್ನು ಕಾರ್ಯಗತ ಮಾಡಿಕೊಂಡು ಮುನ್ನಡೆಯುತ್ತಿರುವ ಶೇಷಾದ್ರಿಪುರಂ ಶಿಕ್ಷಣ ದತ್ತಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದೆ. ವಿಜ್ಞಾನ, ಕಲೆ,ವಾಣಿಜ್ಯ,ಸಂಸ್ಕೃತಿ,ಸಂಸ್ಕಾರ ಪರಂಪರೆ ಎಲ್ಲದರ ಸಮರಸವನ್ನು ವಿದ್ಯಾರ್ಥಿಗಳಿಗೆ ನೀಡಿ ಸಮಾಜಕ್ಕೆ ಉದಾತ್ತ ವ್ಯಕ್ತಿಗಳನ್ನು ನೀಡುತ್ತಿರುವ ಹೆಮ್ಮೆ ಈ ದತ್ತಿಯದು. ಎಲ್ಲ ಜ್ಞಾನ ಶಿಸ್ತುಗಳನ್ನು ಒಪ್ಪಿರುವ ಅಪ್ಪಿರುವ ಶೇಷಾದ್ರಿಪುರಂ ಶಿಕ್ಷಣ ದತ್ತಿ ಉತ್ತಮ ಶಿಕ್ಷಣವನ್ನು ನೀಡುವಲ್ಲಿ ದಾಪುಗಾಲನ್ನಿಟ್ಟು ಮುನ್ನಡೆಯುತ್ತಿರುವುದು ಎಲ್ಲರ ಅಭಿಮಾನಕ್ಕೆ ಕಾರಣವಾಗಿದೆ.

ಶೇಷಾದ್ರಿಪುರಂ ಶಿಕ್ಷಣದತ್ತಿಯು ತನ್ನದೇ ಆದ ಪರಂಪರೆಯನ್ನು ಹೊಂದಿದ್ದು ಉತ್ತಮ ಅನುಭವದೊಂದಿಗೆ ಸಾಗುತ್ತಿದೆ.೧೯೩೦ರಲ್ಲಿ ಸಮಾಜಕ್ಕೆ ಉತ್ತಮ ಶಿಕ್ಷಣವನ್ನು ನೀಡಬೇಕೆಂಬ ಸದುದ್ದೇಶದಿಂದ ದಿವಂಗತ ಶ್ರೀಮತಿ ಆನಂದಮ್ಮ ಮತ್ತು ಶ್ರೀಮತಿ ಸೀತಮ್ಮ ಇವರಿಬ್ಬರು ಸ್ತ್ರೀ ಸಮಾಜ ಮಾಧ್ಯಮಿಕ ಶಾಲೆಯನ್ನು ಪ್ರಾರಂಭ ಮಾಡುವ ಮೂಲಕ ಸಂಸ್ಥೆಯನ್ನು ಸ್ಥಾಪಿಸಿದರು.೨೦ ಮಕ್ಕಳಿಂದ ೨ಚಿಕ್ಕ ಕೊಠಡಿಗಳಲ್ಲಿ ಸಿಲಿಕಾನ್ ಸಿಟಿ,ಉದ್ಯಾನ ನಗತಿ ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಪ್ರಾರಂಭವಾಯಿತು. ಅಂದಿನಿಂದ ಹಿಂದಿರುಗಿ ನೋಡದ ಸಂಸ್ಥೆ ೧೯೪೪ರಲ್ಲಿ ಮೈಸೂರು ರಾಜ್ಯ ಸರ್ಕಾರದಿಂದ ಮಾನ್ಯತೆಯನ್ನು ಪಡೆದು ದಿನೇ ದಿನೇ ಬೆಳೆದು ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮವಾದ ಧನಾತ್ಮಕ ಆತ್ಮವಿಶ್ವಾಸ ತುಂಬುವ ಒಂದು ನಿರ್ದೇಶಕ ಸೂಚನಾಫಲಕವಾಗಿ ತನ್ನ ಸ್ಥಾನವನ್ನು ಸಮಾಜದಲ್ಲಿ ಪಡೆದುಕೊಂಡು ಬೆಳವಣಿಗೆಯ ಹಾದಿಯಿಂದ ಅಭಿವೃದ್ಧಿಯ ಹಾದಿಯತ್ತ ಬೆಳೆದು ಇಂದು ೨೨ಸಾವಿರ ವಿದ್ಯಾರ್ಥಿಗಳನ್ನು ಒಳಗೊಂಡ ೩೨ ಶಾಖೆಗಳನ್ನು ಬೆಂಗಳೂರು,ಮೈಸೂರು,ತುಮಕೂರು,ಮಂಡ್ಯ ನಗರದಲ್ಲಿ ಹೊಂದಿಕೊಂಡು ೧೫೦೦ ಉದ್ಯೋಗಿಗಳಿಗೆ ಕೆಲಸವನ್ನು ನೀಡುತ್ತಾ ಬಂದಿದೆ. ಪ್ರಾಥಮಿಕ ಶಿಕ್ಷಣದಿಂದ ಪ್ರಾರಂಭವಾಗಿ,ಇಂದು ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಪದವಿ, ಅಂತರಾಪ್ಟ್ರೀಯ ಹಂತದಲ್ಲಿ ಎಂ.ಬಿ.ಎ ಅಧ್ಯಯನ ಕೇಂದ್ರ,ಸಂಶೋಧನಾ ಅಧ್ಯಯನ ಕೇಂದ್ರ ಸ್ಥಾಪನೆಯವರೆಗೂ ಒಂದು ಬೃಹದಾಕಾರದ ಸಂಸ್ಥೆಯಾಗಿ ಬೆಳೆದು ನಿಂತಿದೆ. ಪ್ರತಿಯೊಂದು ಶಾಖೆಯು ಉತ್ತಮವಾದ ಆಡಳಿತವನ್ನು,ಆಡಳಿತಾಧಿಕಾರಿಗಳನ್ನು, ಉತ್ತಮ ಸಲಹೆಗಾರರನ್ನು , ನುರಿತ ಅನುಭವಿ ಪ್ರಾಂಶುಪಾಲರು ಹಾಗೂ ಅನುಭವಿ ಉಪನ್ಯಾಸಕರುಗಳನ್ನು ಒಳಗೊಂಡು ಬಹಳ ಎತ್ತರವಾಗಿ ಬೆಳೆದು ನಿಂತಿರುವುದೇ ಶೇಷಾದ್ರಿಪುರಂ ಶಿಕ್ಣ ಸಂಸ್ಥೆ. ಇದರ ರೂವಾರಿ ಅಧ್ಯಕ್ಷರಾಗಿ ಇಂದು ಶ್ರೀಯುತ ಎನ್.ಆರ್.ಪಂಡಿತಾರಾಧ್ಯರವರ ಶ್ರಮ, ನಾಡೋಜ ಡಾ.ವೂಡೇ.ಪಿ.ಕೃಷ್ಣರವರು ಗೌರವಾನ್ವಿತ ಪ್ರಧಾನ ಕಾರ್ಯದರ್ಶಿಗಳು ಹಾಗೂ ಉಪಾಧ್ಯಕ್ಷರು,ಖಜಾಂಚಿ, ಜಂಟಿ ಕಾರ್ಯದರ್ಶಿ,ಸಹಾಯಕ ಕಾರ್ಯದರ್ಶಿ,ಹಾಗೂ ಧರ್ಮದರ್ಶಿಗಳನ್ನು ಒಳಗೊಂಡ ಸಂಸ್ಥೆಯು ಇವರೆಲ್ಲರ ಅವಿರತ ಶ್ರಮದಿಂದಾಗಿ ಇಂದು ಬೃಹದಾಕಾರವಾಗಿ ಬೆಳೆದು ನಾಡಿನೆಲ್ಲೆಡೆ ಶಿಕ್ಷಣವನ್ನು ನೀಡಲು ಮುಂದಾಗಿ ಸಾಂಸ್ಕೃತಿಕ ನಗರಿ, ನಿವೃತ್ತರ ಸ್ವರ್ಗ ಎನಿಸಿಕೊಂಡಿರುವ ಮೈಸೂರು ನಗರದ ಹೆಬ್ಬಾಳದ ಹೊರ ವರ್ತುಲ ರಸ್ತೆಯಲ್ಲಿ ೨೭ಮತ್ತು ೨೮ನೇ ಶಾಖೆಯಾಗಿ ತಲೆ ಎತ್ತಿ ನಿಂತಿರುವುದೇ ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜು ೨೦೧೪ರಲ್ಲಿ ಸ್ಥಾಪನೆಯಾಗಿ ವಿಜ್ಞಾನ ವಿಭಾಗ ಹಾಗೂ ವಾಣಿಜ್ಯ ವಿಭಾಗಗಳನ್ನು ತೆರೆದು ಯಶಸ್ವಿಯಾಗಿ ನಡೆದುಕೊಂಡು ಹೆಜ್ಜೆಯಿಟ್ಟು ಇಂದು ಎಂಟು ವರ್ಷಗಳನ್ನು ಪೂರೈಸುತ್ತಿದೆ. ಇಂದಿಗೆ ಆರು ತಂಡಗಳು ಪದವಿ ಪೂರ್ವ ಕಾಲೇಜಿನಿಂದ ಹೊರ ಬಂದಿರುವ ವಿದ್ಯಾರ್ಥಿಗಳು ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಅಂದರೆ ವೈದ್ಯಕೀಯ ಶಿಕ್ಷಣ, ಎಂಜಿನಿಯರ್ ಶಿಕ್ಷಣ, ದಂತ ವೈದ್ಯ ಶಿಕ್ಷಣವನ್ನು ಪಡೆಯುತ್ತಿದ್ದು ಇನ್ನ ಅನೇಕ ವಿದ್ಯಾರ್ಥಿಗಳು, ಅನೇಕ ಕಂಪನಿಗಳಲ್ಲಿ ವೃತ್ತಿ ಜೀವನವನ್ನು ಪ್ರಾರಂಭಿಸಿರುತ್ತಾರೆ. ಕಾಲೇಜಿನಲ್ಲಿ ಪಠ್ಯ ಪುಸ್ತಕದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ,ಆಧ್ಯಾತ್ಮಿಕ, ಚಿಂತನೆಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದು, ಮಹಾತ್ಮ ಗಾಂಧೀ,ಅಧ್ಯಯನ ಕೇಂದ್ರ, ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ,ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಅವರ ಚಿಂತನೆಗಳ ಬಗ್ಗೆ ಅಧ್ಯಯನ ಮಾಡಲು ನೆರವಾಗುತ್ತಿದೆ. ಎನ್.ಎಸ್.ಎಸ್. ಹಾಗೂ ಎನ್.ಸಿ.ಸಿ ಘಟಕಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಸಮಾಜ ಸೇವೆ ಮಾಡುವ ಅವಕಾಶಗಳ ಬಗ್ಗೆ ಹೆಚ್ಚಿನ ಗಮನ ಹರಿಸುವಲ್ಲಿ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜು ಮೈಸೂರಿನಲ್ಲಿ ಉತ್ತಮ ಶ್ರೇಣಿಯಲ್ಲಿ ಬೆಳೆದಿದೆ.

ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಧೇಯ್ಯೋದ್ದೇಶಗಳು;

ನಂಬಿಕೆ

ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯು ವೈಯಕ್ತಿಕವಾಗಿ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣವನ್ನು ಒದಗಿಸಿಕೊಡುವ ಹೆಬ್ಬಯಕೆಯುಳ್ಳದಾಗಿದೆ.

ದೃಷ್ಟಿಕೋನ

ಸಮಾಜದಲ್ಲಿ ಪ್ರತಿಯೊಬ್ಬ ಸಾಮಾನ್ಯ ವಿದ್ಯಾರ್ಥಿಗಳಿಗೂ ಕೈಗೆಟುಕುವ ರೀತಿಯಲ್ಲಿ ಶಿಕ್ಷಣ ಒದಗಿಸುವ ಅತ್ಯುನ್ನತವಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಲಿಕೆ, ಸಂಶೋಧನೆ ಮತ್ತು ಉತ್ತಮ ಜ್ಞಾನಾರ್ಜನೆ ನೀಡುವ ಸಂಸ್ಥೆಯಾಗಿ ಹೊರಹೊಮ್ಮುವ ಉದ್ದೇಶ ಹೊಂದಿದೆ.

ಧ್ಯೇಯವಾಕ್ಯ

ಈ ಸಂಸ್ಥೆಯ ಧ್ಯೇಯವಾಕ್ಯವು ವಿದ್ಯಾರ್ಥಿಗಳಲ್ಲಿ, ಶಿಕ್ಷಕರಲ್ಲಿ,,ಸಂಸ್ಥಾಪಕರಲ್ಲಿ, ಭಾಗೀದಾರರಲ್ಲಿ ಉತ್ತಮವಾದ ಕಾರ್ಯಕಾರಿ ಪ್ರಯೋಜನೀಯ ಉತ್ಸಾಹದಿಂದ ಕೂಡಿದ ಸಂಶೋಧನೆ,ಆರೋಗ್ಯಕರವಾದ ಚಿಂತನೆ ಮತ್ತು ಪ್ರತಿಯೊಬ್ಬರಲ್ಲೂ ಧನಾತ್ಮಕವಾಗಿ ಶಿಕ್ಷಣದಲ್ಲಿ ಐಶ್ವರ್ಯವಂತರಾಗಿ ಮಾಡುವ ಧ್ಯೇಯ ಹೊಂದಿದೆ.

ಗುರಿ

ಈ ಸಂಸ್ಥೆಯ ಗುರಿ ಎನೆಂದರೆ ವಿದ್ಯಾರ್ಥಿಗಳನ್ನು ಒಂದು ಸುಂದರವಾದ ಮುತ್ತು ಹರಳುಗಳಿಂದ ಕೂಡಿದ ಶಿಲೆಯನ್ನಾಗಿ ರೂಪುಗೊಳಿಸಿ, ಸಂತೋಷ,ಶಾಂತಿ,ಸಾಮರಸ್ಯ,ಮತ್ತು ಅಭಿವೃದ್ಧಿಗೊಳಿಸುವ ಗುರಿ ಹೊಂದಿದೆ.

ಶೇಷಾದ್ರಿಪುರಂ ಶಿಕ್ಷಣ ದತ್ತಿಯ ವಿಶೇಷತೆಗಳು

ಎಸ್ ಎಸ್ ಎಲ್.ಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾವಕಾಶವನ್ನು ಕಲ್ಪಿಸಿದೆ.

ಉನ್ನತ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ಪ್ರಮಾಣ ಪತ್ರವನ್ನು ನೀಡುವ ಮೂಲಕ ಗೌರವ ಪ್ರೋತ್ಸಾಹಗಳನ್ನು ನೀಡಲಾಗುವುದು.

ಎನ್.ಎಸ್.ಎಸ್. ಎನ್.ಸಿ.ಸಿ. ಹಾಗೂ ರೆಡ್ ಕ್ರಾಸ್ ಸಂಸ್ಥೆಗಳೊಡನೆ ಸಂಬಂಧವನ್ನು ಹೊಂದಿರುವ ಸಂಸ್ಥೆ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಮೂಡಿಸಲು ಪ್ರಯತ್ನಿಸುತ್ತಿದೆ.

ಬುದ್ದ, ಬಸವ,ಅಂಬೇಡ್ಕರ್,ಗಾಂಧೀಜಿ ಸಂಶೋಧನ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಿ ಆ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡುತ್ತಿದೆ.

ರಾಮಕೃಷ್ಣ ಆಶ್ರಮದೊಡನೆ ಒಡನಾಟವನ್ನು ಹೊಂದಿರುವ ಸಂಸ್ಥೆ, ವಿಜ್ಞಾನ,ವಾಣಿಜ್ಯ,ಕಲೆಗಳ ಜೊತೆಗೆ, ಸಂಸ್ಕಾರಗಳ ಅರಿವನ್ನು ಮೂಡಿಸುತ್ತಿರುವುದು.

ವಿದ್ಯಾರ್ಥಿಗಳ ಜೊತೆಯಲ್ಲಿ ಉಪನ್ಯಾಸಕರ ಜ್ಞಾನವೃದ್ಧಿಗೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು.

ಮೊಬೈಲ್ ನಂತಹ ಆಧುನಿಕ ತಂತ್ರಜ್ಞಾನವನ್ನು ಶಿಕ್ಷಣಕ್ಕೆ ಪೂರಕವಾಗಿ ಬಳಸುತ್ತಿರುವುದು