ನಮ್ಮ ಕಾಲೇಜು ಪ್ರವೇಶಾತಿಯನ್ನು ಪಡೆದ ವಿದ್ಯಾರ್ಥಿಗಳು ಚಾಚು ತಪ್ಪದೇ ಕೆಳಗಿನ ನಿಯಮಗಳನ್ನು ಪಾಲಿಸಬೇಕು.
ಕಾಲೇಜು ಪ್ರತಿದನ ೯ ಗಂಟೆಗೆ ರಾಷ್ಟ್ರಗೀತೆಯೊಂದಿಗೆ ಆರಂಭವಾಗುತ್ತದೆ.ವಿದ್ಯಾರ್ಥಿಗಳು ೮.೫೦ ಕ್ಕೆ ಸರಿಯಾಗಿ ಕಾಲೇಜಿಗೆ ಹಾಜರಾಗಬೇಕು.
ಕಡ್ಡಾಯವಾಗಿ ಶೇಕಡಾ ೯೫% ಹಾಜರಾತಿ ಹೊಂದಿರಬೇಕು.
ಪ್ರತಿದಿನ ಕಾಲೇಜು ಸೂಚಿಸಿರುವ ಸಮವಸ್ತ್ರವನ್ನು ಧರಿಸಿ ಬರಬೇಕು.
ಕಾಲೇಜಿನ ಆವರಣದಲ್ಲಿ, ತರಗತಿಯಲ್ಲಿ ಶಿಸ್ತು ಬದ್ಧವಾಗಿ ನಡೆದುಕೊಳ್ಳಬೇಕು.
ಕಾಲೇಜಿಗೆ ಬರುವಾಗ ತಪ್ಪದೇ ಗುರುತಿನ ಚೀಟಿಯನ್ನು ಧರಿಸಿರಬೇಕು.
ಕಾಲೇಜಿನ ಗ್ರಂಥಾಲಯದಲ್ಲಿ ನಿಶ್ಯಬ್ಧವನ್ನು ಕಾಪಾಡಬೇಕು ಜೊತೆಗೆ ಅದರ ಸದ್ಭಳಕೆ ಮಾಡಿಕೊಳ್ಳಬೇಕು.
ಬಿಡುವಿನ ವೇಳೆಯಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.
ಕಾಲೇಜಿನ ಆವರಣ ಮತ್ತು ತರಗತಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಿಮ್ಮ ಜವಬ್ದಾರಿಯಾಗಿರುತ್ತದೆ.
ಕಾಲೇಜಿನಲ್ಲಿ ಯಾವುದೇ ರೀತಿಯ ಹುಟ್ಟುಹಬ್ಬದಂತಹ ಆಚರಣೆಗಳಿಗೆ ಅವಕಾಶವಿರುವುದಿಲ್ಲ. ಪರೀಕ್ಷಾ ಸಮಯದಲ್ಲಿ ಯಾವುದೇ ರೀತಿಯ ಚೀಟಿಗಳನ್ನು ತರುವಂತಿಲ್ಲ.
ಕಾಲೇಜಿನ ಆವರಣದಲ್ಲಿ ರ್ಯಾಗಿಂಗ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಕಾಲೇಜಿನಲ್ಲಿ ಅಸಭ್ಯ ವರ್ತನೆಗಳು ಕಂಡು ಬಂದಲ್ಲಿ ಕಟ್ಟುನಿಟ್ಟಿನ ಕ್ರಮತೆಗೆದುಕೊಳ್ಳಲಾಗುವುದು.