ಅರ್ಜಿಯನ್ನು ಭರ್ತಿಮಾಡಿ,ನಿಗದಿ ಪಡಿಸಿದ ದಿನಾಂಕದೊಳಗೆ ಪ್ರಾಂಶುಪಾಲರಿಗೆ ತಲುಪಿಸುವುದು.
ಅರ್ಜಿಯ ಜೊತೆಗೆ ವರ್ಗಾವಣೆ ಪತ್ರ,ಅಂಕಪಟ್ಟಿ,ಆಧಾರ್ ಕಾರ್ಡ್ ಜೆರಾಕ್ಸ್ ಅನ್ನು ಲಗತ್ತಿಸುವುದು.
ದಾಖಲಾತಿಯ ಸಮಯದಲ್ಲಿ ಎಲ್ಲ ದಾಖಲೆಗಳ ಅಸಲು ಪ್ರತಿಯನ್ನು ನಿಗದಿ ಪಡಿಸಿದ ದಿನಾಂಕದೊಳಗೆ ಸಲ್ಲಿಸಬೇಕು ಜೊತೆಗೆ ಕಡ್ಡಾಯವಾಗಿ ಪ್ರಾಂಶುಪಾಲರನ್ನು ಭೇಟಿ ಮಾಡಬೇಕು.
ಐ.ಸಿ.ಎಸ್.ಸಿ, ಸಿ.ಬಿ.ಎಸ್.ಸಿ ಹಾಗೂ ಇತರೆ ಬೋರ್ಡ್ ನಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಮೈಗ್ರೇಷನ್ ಪತ್ರವನ್ನು ಅರ್ಜಿಯೊಂದಿಗೆ ಲಗತ್ತೀಸಬೇಕು.
ನಮ್ಮ ಸಂಸ್ಥೆಯಲ್ಲಿ ಭಾಷಾ ವಿಷಯದಲ್ಲಿ ಕನ್ನಡ, ಹಿಂದಿ, ಇಂಗ್ಲೀಷ್ ಮತ್ತು ಸಂಸ್ಕೃತ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ.
ಎರಡು ಭಾವಚಿತ್ರಗಳನ್ನು ಮತ್ತು ಐದು ರೂಪಾಯಿಯ ಸ್ವಯಂ ವಿಳಾಸವಿರುವ ಅಂಚೆ ಲಕೋಟಿಯನ್ನು ನೀಡಬೇಕು.
ಎಲ್ಲಾ ದಾಖಲಾತಿಗಳು ಪದವಿಪೂರ್ವ ಶಿಕ್ಷಣ ಇಲಾಖೆಯ ಅನುಮತಿಯೊಂದಿಗೆ, ಇಲಾಖೆಯ ಶಿಸ್ತು ಮತ್ತು ನಿಯಮಗಳಿಗೆ ಒಳಪಟ್ಟಿರುತ್ತದೆ.
ಎಲ್ಲಾ ಕೋರ್ಸ್ ಗಳನ್ನು ಆ ವರ್ಷದಲ್ಲೇ ಮುಗಿಸಿರಬೇಕು.
ಶೇಕಡಾ ೯೫% ಹಾಜರಾತಿ ಇರಬೇಕು.
ಎಲ್ಲಾ ಪ್ರಾಯೋಗಿಕ ಅಸೈನ್ ಮೆಂಟ್ ಗಳನ್ನು ಪೂರ್ಣಗೊಳಿಸಿ, ಸಂಬಂಧಪಟ್ಟ ಶಿಕ್ಷಕರಿಂದ ಪ್ರಮಾಣಿಕರಿಸಿರಬೇಕು.
ಶುಲ್ಕ ಪಾವತಿಮಾಡದೇ ಇರುವ ವಿದ್ಯಾರ್ಥಿಗಳನ್ನು ಯಾವುದೇ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಲಾಗುವುದಿಲ್ಲ.